Saturday, September 18, 2010

ಬರೆಯುವ ಮುಂಚೆ ಎರಡು ಮಾತು!

ಸಾ ಶಿ ಮರುಳಯ್ಯ ನವರ ಬಳಿ ಕಾವ್ಯ ಮೀಮಾಂಸೆ ಕಲಿಯುವ ಅದೃಷ್ಟ ನನ್ನದಾಗಿತ್ತು. ಸಾಶಿ ಯವರ ಪಾಠ ಕೇಳಿದ ಮೇಲಂತೂ ಅದು ನನ್ನ favorite  ವಿಷಯವಾಯ್ತು.

ಅಲಂಕಾರ, ರೀತಿ, ಧ್ವನಿ, ರಸ, ಔಚಿತ್ಯಗಳನ್ನು  ಅವರು (ಅಲಂಕಾರ) "ಪ್ರಸ್ಥಾನಪಂಚಕ" ಗಳೆಂದೇ ಕರೆದಿದ್ದಾರೆ. ಧ್ವನಿ, ರಸ, ಔಚಿತ್ಯ ಗಳು ಕಾವ್ಯ ಗಾಯತ್ರಿಗಳೆಂದೇ ಪ್ರಸಿದ್ದ. ರಸವಂತೂ ಕಾವ್ಯದ ಆತ್ಮ!.

ರಸ ಸಿದ್ಧಾಂತ / ರಸ ಪ್ರಸ್ಥಾನವಂತೂ ಭಾರತೀಯ ಕಾವ್ಯ ಮೀಮಾಂಸೆಯ ಬೇರೂ ಹೌದು! ಕಳಶವೂ ಹೌದು!! ತಿರುಳೂ ಹೌದು!!!

ಕಾವ್ಯ ಮೀಮಾಂಸೆಯ ಬಗ್ಗೆ ಅದರಲ್ಲೂ ರಸದ ಬಗ್ಗೆ ಒತ್ತುಕೊಟ್ಟು ಮುಂದೆ ನಾಲ್ಕು ಸಾಲು ಬರಿಯೋಣ ಅಂತ ಈ ಬ್ಲಾಗು.

ನೋಡುವ ಹೇಗೆ ಮುಂದುವರೆಸುತ್ತೇನೆ ಅಂತ.

........................

ಹಿಂದಿರುಗಿ ನನಗೆ ಪಾಠ ಹೇಳಿದವರ ಬಗ್ಗೆ ಆಲೋಚಿಸಿದರೆ ನನಗೆ ಬರಿಯ ಮೇಷ್ಟ್ರು ಅತ್ವ teachers ಕಾಣ್ತಾರೆಯೇ  ಹೊರತು ಗುರುಗಳು ಅಂತ ಕಾಣೋರು ಇಲ್ಲವೇ ಇಲ್ಲವೇನೋ!!. ofcourse ನನ್ನ primary school ಮೇಷ್ಟ್ರುಗಳು ನನಗೆ ತುಂಬಾ ಇಷ್ಟ ಆಗ್ತಾರಾದ್ರೂ "ಗುರುಗಳು" ಅಂತ ಕರೆಯಬಹುದಾ ಗೊತ್ತಿಲ್ಲ! "ಅಕ್ಷರಮಾತ್ರಂ ಕಲಿಸಿದಾತನ್ ಗುರು" ಅನ್ನೋ ಮಾತೇನೋ ಪ್ರಸಿದ್ದ... ಆದ್ರೆ ಎಲ್ರಿಗೂ, ಎಲ್ರ ಮನಸ್ಸಿಗೂ ಈ ಮಾತು ಹಿಡಿಸಬೇಕಲ್ಲ. ಗೌರವ ತಾಳೋದು ಬೇರೆ ಗುರು ಅಂತ ಒಪ್ಪಿಕೊಳ್ಳೋದು ಬೇರೆ!

ಸಾಶಿ ನನ್ನ ಗುರುಗಳು ಅಂತ ಹೆಮ್ಮೆಯಿಂದ ನಾನು ಹೇಳಿ ಕೊಳ್ಳಬಲ್ಲೆ! ಅವರ ಪಾಠ ನನಗೆ ದಕ್ಕಿದ್ದು ನನ ಅದೃಷ್ಟವೆಂದೇ  ನಾನು ತಿಳಿಯುತ್ತೇನೆ.